ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ರಾಷ್ಟ್ರೀಯ ಹಸಿರು ಪಡೆ

 

ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮವು ಭಾರತ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಒಂದು ಪ್ರಮುಖ ಉಪಕ್ರಮವಾಗಿದೆ. ೨೦೦೧-೦೨ರಲ್ಲಿ ಪ್ರಾರಂಭಿಸಲಾದ ಪರಿಸರ ಜಾಗೃತಿ ಮೂಡಿಸಲು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಕೆಲಸ ಮಾಡುವ ಶಾಲಾ ವಿದ್ಯಾರ್ಥಿಗಳನ್ನು ಕಾರ್ಯಕರ್ತರನ್ನಾಗಿ ನಿರ್ಮಿಸುವ ಗುರಿಯನ್ನು ಹೊಂದಿರುತ್ತದೆ. ಆರಂಭದಿಂದಲೂ ರಾಷ್ಟ್ರೀಯ ಹಸಿರು ಪಡೆ(NGC)ಯು ದೇಶಾದ್ಯಂತ 2,೦೦,೦೦೦ ಕ್ಕೂ ಹೆಚ್ಚು ಪರಿಸರ ಕ್ಲಬ್ (Eco club)ಗಳನ್ನು ಹೊಂದಿದೆ ಮತ್ತು ಇದು ಪರಿಸರ ಸಂರಕ್ಷಣಾ ಜಾಲಗಳಲ್ಲಿ ಒಂದಾಗಿದೆ, ಇದು ಪರಿಸರ ಜಾಗೃತಿಯನ್ನು ಸಾಮೂಹಿಕವಾಗಿ ತೆಗೆದುಕೊಳ್ಳುವಲ್ಲಿ ತಳಮಟ್ಟದಲ್ಲಿ ಅದರ ಮಹತ್ವವನ್ನು ಸೂಚಿಸುತ್ತದೆ.

 

ಪರಿಸರ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅರಣ್ಯ, ಪರಿಸರ ಮತ್ತು ಹವಾಮಾನ ಸಚಿವಾಲಯ (ಭಾರತ ಸರ್ಕಾರ), ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಮರ್ಪಿತ ಸರ್ಕಾರೇತರ ಸಂಸ್ಥೆಗಳ ನಡುವಿನ ಅನನ್ಯ ಸಹಭಾಗಿತ್ವವು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ. NGC ಸದಸ್ಯರನ್ನಾಗಿ ನೋಂದಾಯಿಸಿದ ಶಾಲೆಗಳಲ್ಲಿ ಸ್ಥಾಪಿಸಲಾದ ಪರಿಸರ ಕ್ಲಬ್ (Eco club)ಗಳ ಮೂಲಕ ಇದನ್ನು ನಡೆಸಲಾಗುತ್ತದೆ, ಈ ಕಾರ್ಯಕ್ರಮವು ಶಾಲಾ ಮಕ್ಕಳಲ್ಲಿ ಹೊಸ ಕಲ್ಪನೆಗಳು, ವಿಚಾರಗಳು ಮತ್ತು ಅವರ ಆಲೋಚನೆಗಳನ್ನು ಸೃಜನಶೀಲ ಕ್ರಿಯೆಯನ್ನಾಗಿ ಪರಿವರ್ತಿಸುವ ಅವಕಾಶಗಳನ್ನು ಒದಗಿಸುತ್ತದೆ.

 

ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮವು ಭಾರತ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಷ್ಟ್ರೀಯ ಶಾಲಾ ಕಾರ್ಯಕ್ರಮವಾಗಿದ್ದು, ಇದರಲ್ಲಿ ದೇಶಾದ್ಯಂತ ಪ್ರತಿ ಜಿಲ್ಲೆಯ ಸುಮಾರು ೫೦೦ ಶಾಲೆಗಳಲ್ಲಿ ಪರಿಸರ ಕ್ಲಬ್ (Eco club)ಗಳನ್ನು ಸ್ಥಾಪಿಸುವ ಮೂಲಕ ‘ರಾಷ್ಟ್ರೀಯ ಹಸಿರು ಸೇನೆ’ಯನ್ನು ರಚಿಸಲು ಉದ್ದೇಶಿಸಲಾಗಿದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಮನಸ್ಸು ಪ್ರಭಾವಶಾಲಿ ಮತ್ತು ಸೃಜನಶೀಲವಾಗಿರುತ್ತದೆ. ಆದ್ದರಿಂದ ಮಕ್ಕಳು ಸಕರಾತ್ಮಕವಾಗಿ ಪ್ರೆರಿಪಿತರಾಗುತ್ತಾರೆ. ಪರಿಸರ ಜಾಗೃತಿ ಮೂಡಿಸುವುದು ಮತ್ತು ಪರಿಸರದ ರಕ್ಷಣೆ ಮತ್ತು ಸುಧಾರಣೆಗಾಗಿ ಕ್ರಿಯಾಧಾರಿತ ಕಾರ್ಯಕ್ರಮವನ್ನು ಕೈಗೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ೨೦೦೧ ರಲ್ಲಿ ಪ್ರಾರಂಭವಾದಾಗಿನಿಂದ, ಹಲವಾರು ನೋಡಲ್ ಸಂಸ್ಥೆಗಳು ರಾಜ್ಯದಲ್ಲಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಭಾಗಿಯಾಗಿದ್ದವು. ಜನವರಿ ೧, ೨೦೦೯ ರಿಂದ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಪನಿನೀಸಂಸಂ) ಕರ್ನಾಟಕದ ರಾಷ್ಟ್ರೀಯ ಹಸಿರು ಪಡೆಯ ನೋಡಲ್ ಸಂಸ್ಥೆಯಾಗಿದೆ. ಪರಿಸರ ಕ್ಲಬ್ ಪ್ರತಿ ವರ್ಷ ಮೂರು ಹಂತಗಳಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. ಮೊದಲ ಹಂತದ ಚಟುವಟಿಕೆಯೆಂದರೆ ಅರಿವು ಆಧಾರಿತ ಚಟುವಟಿಕೆ: (ಉದಾ. ರ‍್ಯಾಲಿ / ಜಾಥಾ, ತಜ್ಞರ ಮಾತುಕತೆ, ಶೈಕ್ಷಣಿಕ ಚಲನಚಿತ್ರ ಪ್ರದರ್ಶನಗಳು / ಸೆಮಿನಾರ್‌ಗಳು.), ಎರಡನೇ ಹಂತದ ಚಟುವಟಿಕೆಯು ಕ್ರಿಯೆ ಮತ್ತು ವೀಕ್ಷಣೆ (ಸಮೀಕ್ಷೆಯ ಪ್ರವಾಸಗಳು, ದತ್ತಾಂಶ ಸಂಗ್ರಹಣೆ, ದಾಖಲೆ ಸಂಗ್ರಹ) ಮತ್ತು ಮೂರನೇ ಮತ್ತು ಅಂತಿಮ ಹಂತದ ಚಟುವಟಿಕೆಯು ಹೆಚ್ಚು ಕ್ರಿಯಾಶೀಲವಾಗಿದೆ, ಅವುಗಳಾವುವೆಂದೆರೆ (ಗಿಡಗಳನ್ನು ನೆಡುವುದು, ಎರೆಹುಳು ಗೊಬ್ಬರ(vermicomposting), ನೀರು / ಇಂಧನ ಸಂರಕ್ಷಣೆ ಮತ್ತು ನೈರ್ಮಲ್ಯ). ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಪ್ರತಿ ಪರಿಸರ ಕ್ಲಬ್ (Ecoclub)ಗೆ ರೂ. ೫,೦೦೦/- ಗಳನ್ನು ವಾರ್ಷಿಕ ಅನುದಾನ ನೀಡಲಾಗುತ್ತದೆ.ನಿಯಮಿತ ಶಾಲಾ ಭೇಟಿಗಳನ್ನು ನಡೆಸುವ ಮೂಲಕ ಕಾರ್ಯಕ್ರಮವನ್ನು ಸಕ್ರಿಯಗೊಳಿಸಲು ಮತ್ತು ಬಲಪಡಿಸಲು ನಿರಂತರ ಬೆಂಬಲ ಮತ್ತು ಸಹಾಯವನ್ನು ನೀಡುವಲ್ಲಿ ಎನ್‌ಜಿಸಿ ತಂಡವು ತೊಡಗಿಸಿಕೊಂಡಿದೆ ಮತ್ತು ಇಕೋ ಕ್ಲಬ್ ಶಿಕ್ಷಕರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಬೇತಿ / ಕಾರ್ಯಾಗಾರಗಳನ್ನು ನಡೆಸುತ್ತದೆ.

ಇತ್ತೀಚಿನ ನವೀಕರಣ​ : 19-12-2020 05:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಹಸಿರು ಪಡೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080