ಅಭಿಪ್ರಾಯ / ಸಲಹೆಗಳು

ವಿಧಾನ

ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮವು ಭಾರತ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಷ್ಟ್ರೀಯ ಶಾಲಾ ಕಾರ್ಯಕ್ರಮವಾಗಿದ್ದು, ಇದರಲ್ಲಿ ದೇಶಾದ್ಯಂತ ಪ್ರತಿ ಜಿಲ್ಲೆಯ ಸುಮಾರು ೫೦೦ ಶಾಲೆಗಳಲ್ಲಿ ಪರಿಸರ ಕ್ಲಬ್ (Eco club)ಗಳನ್ನು ಸ್ಥಾಪಿಸುವ ಮೂಲಕ ‘ರಾಷ್ಟ್ರೀಯ ಹಸಿರು ಸೇನೆ’ಯನ್ನು ರಚಿಸಲು ಉದ್ದೇಶಿಸಲಾಗಿದೆ.

 

ರಾಹಪದ ಕಾಯ೯ಕ್ರಮದ ವಿಧಾನಗಳು ಇಂತಿವೆ:

  • ರಾಷ್ಟ್ರೀಯ ಹಸಿರು ಪಡೆಯ ಯೋಜನೆಗಳುನ್ನು ಅನುಷ್ಟಾನಕ್ಕೆತರುವ ತರುವ ಜವಬ್ದಾರಿ ಪ್ರತಿ ರಾಹಪ ಸದಸ್ಯ ಶಾಲೆಯದಾಗಿರುತ್ತದೆ.
  • ರಾಹಪ ಶಾಲೆಯ ಪ್ರತಿ ಪರಿಸರ ಕ್ಲಬ್ ಗಳಲ್ಲೂ ೩೦-೫೦ ಮಕ್ಕಳುಗಳಿರುತ್ತಾರೆ.
  • ಪ್ರತಿಯೊಂದು ಇಕೋ-ಕ್ಲಬ್‍ಗೆ ಮೇಲ್ವಿಚಾರಣೆಗಾಗಿ, ಸದಸ್ಯ ಶಾಲೆಯಲ್ಲಿಯ ಎಲ್ಲ ಶಿಕ್ಷಕರಲ್ಲಿ, ಪರಿಸರ ಸಂಬಂಧಿಸಿದ ವಿಷಯಗಳಲ್ಲಿ ಅವರು ಹೊಂದಿರುವ ಆಸಕ್ತಿಯ ಆಧಾರದ ಮೇಲೆ ಒಬ್ಬ ಉಸ್ತುವಾರಿ ಶಿಕ್ಷಕರನ್ನು ಆಯ್ಕೆ ಮಾಡುವುದು.
  • ಜಿಲ್ಲಾ ಮಟ್ಟದಲ್ಲಿ, ಇಕೋ-ಕ್ಲಬ್ ಉಸ್ತುವಾರಿ ವಹಿಸಿಕೊಂಡಿರುವ ಶಿಕ್ಷಕರಿಗೆ ತರಬೇತಿ ಆಯೋಜಿಸಲು, ಮೇಲ್ವಿಚಾರಣೆ ಮಾಡಲು ಮತ್ತು ಕಾಲಕಾಲಕ್ಕೆ ಯೊಜನೆಯ ಅನುಷ್ಠಾನವನ್ನು ನೋಡಿಕೊಳ್ಳಲು ಒಂದು ಜಿಲ್ಲಾ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿ (District Implementation and Monitoring Committee - DIMC) ಇರುವುದು. DIMC ಯು ಜಿಲ್ಲಾಮಟ್ಟದಲ್ಲಿ, ಕಾಲಕಾಲಕ್ಕೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಓಉಅ ಕಾರ್ಯಕ್ರಮದ ಸಂಪೂರ್ಣ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. DIMC ಸಮಿತಿಯ ಅಧ್ಯಕ್ಷರು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದು, ಸಮಿತಿಯಲ್ಲಿ ಜಿಲ್ಲೆಯ ಇತರ ಅಧಿಕಾರಿಗಳನ್ನೊಳಗೊಂಡಂತೆ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣೆ ಇಲಾಖೆ ಇವರು ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಪಯೋಜನ ಸಮನ್ವಯಾಧಿಕಾರಿಗಳು, RMSA & SSA ಇವರು ಸದಸ್ಯರಾಗಿರುತ್ತಾರೆ. ಇವರೊಂದಿಗೆ ಆಯಾ ಜಿಲ್ಲೆಯ ಓಉಅ ಶಾಲೆಯ 05 ಜನ ಆಯ್ದ ಮುಖ್ಯೋಪಾಧ್ಯಾಯರು DIMC ಸಭೆಯ ಸದಸ್ಯರಾಗಿರುತ್ತಾರೆ.
  • ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಗೆ ರಾಜ್ಯ ಮಟ್ಟದ ಚಾಲನಾ ಸಮಿತಿ (State Steering Committee – SSC) ಇರುವುದು. SSC ಸಮಿತಿಯು NGC ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲ ಮಟ್ಟದಲ್ಲಿಯ ಸಂಪರ್ಕಗಳನ್ನು ಒದಗಿಸುತ್ತದೆ ಅಲ್ಲದೆ ಕಾರ್ಯಕ್ರಮದ ಸಮಗ್ರ ನಿರ್ದೇಶನಗಳನ್ನು, ತಿರ್ಮಾನಗಳನ್ನು ಇದೇ ಸಮಿತಿಯಲ್ಲಿ ಕೈಗೊಳ್ಳಲಾಗುತ್ತದೆ.
  • State Nodal Agency (SNA) ಯು ರಾಜ್ಯದಲ್ಲಿ ಯೋಜನೆಯ ಅನುಷ್ಠಾನದ ಸಂಯೋಜನೆ ಮಾಡುವುದಲ್ಲದೆ Master Trainers ನ ತರಬೇತಿಯು ಸೇರಿದಂತೆ ಇತರೆ ಯೋಜನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಕರ್ನಾಟಕದಲ್ಲಿ 01 ನೇ ಜನವರಿ, 2009 ರಿಂದ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (Environmental Management & Policy Research Institute -EMPRI) ಬೆಂಗಳೂರನ್ನು, ಸರ್ಕಾರವು State Nodal Agency ಯಾಗಿ, ಆಯ್ಕೆಮಾಡಿದೆ.
  • ಪ್ರತಿಯೊಂದು ಇಕೋ-ಕ್ಲಬ್‍ಗೆ ಬೇರೆ ಬೇರೆ ಚಟುವಟಿಕೆಗಳನ್ನು ಆಯೋಜಿಸಲು, ಪ್ರತಿ ವರ್ಷದ ರೂ. 5,000/- ಹಣಕಾಸಿನ ಅನುದಾನದ ಒದಗಿಸಲಾಗುವುದು. ಅನುದಾನವು MoEF&CC ಯಿಂದ ನೇರವಾಗಿ State Nodal Agency ಆಗಿರುವ EMPRI ಗೆ ಬಿಡುಗಡೆಯಾಗುತ್ತದೆ. ಅನುದಾನದ ಸರಾಗ ಬಿಡುಗಡೆಗಾಗಿ, EMPRI ಯು ನೇರವಾಗಿ ಆಯ್ಕೆಯಾದ ಓಉಅ ಶಾಲೆಗೆ (ಇಕೋ-ಕ್ಲಬ್‍ಗೆ) ಬಿಡುಗಡೆಮಾಡಲಾಗುತ್ತದೆ.

 

 

 

 

ಇತ್ತೀಚಿನ ನವೀಕರಣ​ : 05-03-2020 12:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಹಸಿರು ಪಡೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080