ಅಭಿಪ್ರಾಯ / ಸಲಹೆಗಳು

ರಾಹಪ ಹೇಗೆ ಕೆಲಸ ಮಾಡುತ್ತದೆ

ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮವು ಭಾರತ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಒಂದು ಪ್ರಮುಖ ಉಪಕ್ರಮವಾಗಿದೆ. ೨೦೦೧-೦೨ರಲ್ಲಿ ಪ್ರಾರಂಭಿಸಲಾದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು, ಪರಿಸರ ಜಾಗೃತಿ ಮೂಡಿಸಲು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಕೆಲಸ ಮಾಡುವ ಶಾಲಾ ವಿದ್ಯಾರ್ಥಿಗಳನ್ನು ಕಾರ್ಯಕರ್ತರನ್ನಾಗಿ ನಿರ್ಮಿಸುವ ಗುರಿಯನ್ನು ಹೊಂದಿರುತ್ತದೆ. ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮವು ಭಾರತ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಷ್ಟ್ರೀಯ ಶಾಲಾ ಕಾರ್ಯಕ್ರಮವಾಗಿದ್ದು, ಇದರಲ್ಲಿ ದೇಶಾದ್ಯಂತ ಪ್ರತಿ ಜಿಲ್ಲೆಯ ಸುಮಾರು ೫೦೦ ಶಾಲೆಗಳಲ್ಲಿ ಪರಿಸರ ಕೂಟಗಳನ್ನು ಸ್ಥಾಪಿಸುವ ಮೂಲಕ ‘ರಾಷ್ಟ್ರೀಯ ಹಸಿರು ಸೇನೆ’ಯನ್ನು ರಚಿಸಲು ಉದ್ದೇಶಿಸಲಾಗಿದೆ.

 

೨೦೦೯, ಜನವರಿಯಿಂದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಕನಾ೯ಟಕದ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮಕ್ಕೆ ನೊಡಲ್ ಸಂಸ್ಥೆಯಾಗಿದೆ.

 

 

 

 

ಫರಿಸರ ಕೂಟಗಳು ಪ್ರತಿ ವಷ೯ ಹಲವಾರು ಚಟುವಟಿಕೆಗಳನ್ನು ಮೂರು ವಿಧಗಳಲ್ಲಿ ಹಮ್ಮಿಕೊಳ್ಳುತ್ತದೆ .

 

ಜಾಗೃತಿ ಆಧಾರಿತ ಚಟುವಟಿಕೆಗಳು

  • ರ‍್ಯಾಲಿ

  • ಜಾಥಾಗಳು

  • ತಜ್ಞರ ಮಾತುಕತೆ

  • ಶೈಕ್ಷಣಿಕ ಚಿತ್ರಗಳು

  • ಸೆಮಿನಾರ್ 

 

ವೀಕ್ಷಣೆ ಆಧಾರಿತ ಚಟುವಟಿಕೆಗಳು

  • ಸಮೀಕ್ಷೆ ವಿಹಾರ

  • ವಿಷಯ ಸಂಗ್ರಹಣೆ

  • ದಾಖಲೆ ಇರುಸುವಿಕೆ

 

ಕ್ರಿಯಾಶೀಲ ಆಧಾರಿತ ಚಟುವಟಿಕೆಗಳು

  • ತೋಟಗಾರಿಕೆ

  • ಎರೆ ಹುಳುಗಳ ಮಿಶ್ರಗೊಬ್ಬರ ತಯಾರುವಿಕೆ

  • ನೀರು ಮತ್ತು ಶಕ್ತಿ ಸಂರಕ್ಷಣೆ

  • ನೈರ್ಮಲ್ಯ


ಭಾರತ ಸರ್ಕಾರವು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಪ್ರತಿ ಪರಿಸರ ಕೂಟಗಳಿಗೆ ಗ ರೂ. ೫,೦೦೦/- ಗಳನ್ನು ವಾರ್ಷಿಕ ಅನುದಾನ ನೀಡುತ್ತದೆ. ನಿಯಮಿತ ಶಾಲಾ ಭೇಟಿಗಳನ್ನು ನಡೆಸುವ ಮೂಲಕ ಕಾರ್ಯಕ್ರಮವನ್ನು ಸಕ್ರಿಯಗೊಳಿಸಲು ಮತ್ತು ಬಲಪಡಿಸಲು ನಿರಂತರ ಬೆಂಬಲ ಮತ್ತು ಸಹಾಯವನ್ನು ನೀಡುವಲ್ಲಿ ರಾಷ್ಟ್ರೀಯ ಹಸಿರು ಪಡೆ ತಂಡವು ತೊಡಗಿಸಿಕೊಂಡಿದೆ ಮತ್ತು ಪರಿಸರ ಕೂಟ ಶಿಕ್ಷಕರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಬೇತಿ / ಕಾರ್ಯಾಗಾರಗಳನ್ನು ನಡೆಸುತ್ತದೆ. ರಾಷ್ಟ್ರೀಯ ಹಸಿರು ಪಡೆ ಶಾಲೆಯ ಪ್ರತಿ ಪರಿಸರ ಕೂಟಗಳಲ್ಲೂ ೩೦-೫೦ ಮಕ್ಕಳುಗಳಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 11-03-2020 02:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಹಸಿರು ಪಡೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080